ಶ್ರೀಗಣೇಶ ಪುರಾಣ ಪೀಠಿಕೆ Get link Facebook X Pinterest Email Other Apps August 22, 2020 https://anchor.fm/dr-krishna-moorthy-dambe/episodes/ep-eigdfl Get link Facebook X Pinterest Email Other Apps Comments
ಶ್ರೀಮದ್-ವಾರುಣ-ಮಹಾಪುರಾಣಮ್ ೩ May 25, 2026 ಶ್ರೀಮದ್-ವಾರುಣಮಹಾಪುರಾಣಮ್ ೧.೧.೩ ತೃತೀಯೋऽಧ್ಯಾಯಃ ( ಋ.ಸಂ.೧೦.೧೨೧.೧, ತೈ.ಸಂ.೪.೨.೮.೫— ಹಿರಣ್ಯಗರ್ಭ ಇತಿ ದಶರ್ಚಂ ಸೂಕ್ತಮ್ | ಹಿರಣ್ಯಗರ್ಭಃ ಪ್ರಾಜಾಪತ್ಯ ಋಷಿಃ | ತ್ರಿಷ್ಟುಪ್ ಛನ್ದಃ | ಕಶಬ್ದಾಭಿಧೇಯಃ ಪ್ರಜಾಪತಿಃ, ದೇವತಾ || ಹಿರಣ್ಯಗರ್ಭಃ ಸಮವರ್ತತಾಗ್ರೇ ಭೂತಸ್ಯ ಜಾತಃ ಪತಿರೇಕ ಆಸೀತ್ | ಸ ದಾಧಾರ ಪೃಥ್ವೀಂ ದ್ಯಾಮುತೇಮಾಂ ಕಸ್ಮೈ ದೇವಾಯ ಹವಿಷಾ ವಿಧೇಮ || ) ಹಿರಣ್ಯಗರ್ಭಸೂಕ್ತಂ ಹಿ ದಶರ್ಚಂ ದಶಮೇ ತಥಾ | ಋಗ್ವೇದೇ ಮಣ್ಡಲೇ ತತ್ರ ಶತೋತ್ತರೈಕವಿಂಶಕಮ್ || ೧ || ಋಗ್ವೇದಸಂಹಿತೆಯಲ್ಲಿ ೧೦ನೆಯ ಮಂಡಲದಲ್ಲಿ ೧೨೧ನೇ ಸೂಕ್ತವೇ ಹಿರಣ್ಯಗರ್ಭಸೂಕ್ತವು. ಇದು ೧೦ ಋಕ್ಕುಗಳಿಂದ ಕೂಡಿರುವುದು. ಪ್ರಜಾಪತಿಸುತೋ ದ್ರಷ್ಟಾ ಹಿರಣ್ಯಗರ್ಭನಾಮಕಃ | ತ್ರಿಷ್ಟುಪ್-ಛನ್ದಃ ಕಶಬ್ದಾಖ್ಯಃ ಪ್ರಜಾಪತಿಶ್ಚ ದೇವತಾ || ೨ || ಇದರ ದ್ರಷ್ಟಾರನು (ಋಷಿಗಳು ಮಂತ್ರದ್ರಷ್ಟಾರರೇ ಹೊರತು ಕರ್ತಾರರಲ್ಲ, ಮಂತ್ರಗಳನ್ನೂ, ಮಂತ್ರಾರ್ಥಗಳನ್ನೂ ಕಂಡುಕೊಂಡವರೇ ಋಷಿಗಳು. “ಋಷಿರ್ದರ್ಶನಾತ್”) ಪ್ರಜಾಪತಿಯ ಮಗನಾಗಿ ಪ್ರಾಜಾಪತ್ಯನೆನಿಸಿದ ಹಿರಣ್ಯಗರ್ಭನೆಂಬವನು. ಈ ಸೂಕ್ತವು ೧೧ ಅಕ್ಷರಗಳ ೪ ಪಾದಗಳುಳ್ಳ ತ್ರಿಷ್ಟುಪ್ ಛಂದಸ್ಸಿನಲ್ಲಿದೆ. (ವೈದಿಕ ಛಂದಸ್ಸಿನ ವಿವಿಧ ಲೌಕಿಕ ಆವೃತ್ತಿಗಳೇ ವೃತ್ತಗಳು. ವೈದಿಕ ತ್ರಿಷ್ಟುಪ್ ಛಂದಸ್ಸಿಗೆ ಲೌಕಿಕ ಉದಾಹರಣೆಗಳು— ಇಂದ್ರವಜ್ರಾ, ಉಪೇಂದ್ರವಜ್ರಾ, ಉಪಜಾತಿ, ಶಾಲಿನೀ, ವಾತೋರ್ಮೀ, ರಥೋದ್ಧತಾ…) “ಕಃ” ಎಂಬ ಹೆಸರಿನ ಪ್ರಜಾಪತ... Read more
ಶ್ರೀಮದ್ಭಾಗವತ-ಮಹಾಪುರಾಣಮ್ (ಅನೇಕ ಸಂಸ್ಕೃತವ್ಯಾಖ್ಯಾನಗಳ ಕನ್ನಡಾನುವಾದ) ಸ್ಕಂಧ ೧ August 07, 2021 ಶ್ರೀಮದ್ಭಾಗವತ-ಮಹಾಪುರಾಣಮ್ (ಅನೇಕ ಸಂಸ್ಕೃತವ್ಯಾಖ್ಯಾನಗಳ ಕನ್ನಡಾನುವಾದ) ಸ್ಕಂಧ ೧ —ಡಾ| ಕೃಷ್ಣಮೂರ್ತಿಶಾಸ್ತ್ರೀ, ದಂಬೆ, ಪುಣಚ, ಬಂಟ್ವಾಳ ತಾ|, ದ.ಕ.ಜಿಲ್ಲೆ.—574243 ಮೊ.9972716812 E-mail id— krishnamoorthydr77@gmail.com ಪೀಠಿಕೆ ಶ್ರೀಮದ್ಭಾಗವತವು ಸಾಕ್ಷಾತ್ ಭಗವಂತನ ಸ್ವರೂಪ. “ಭಗವತಃ ಭಗವತ್ಯಾಃ ವಾ ಇದಮ್”— ಭಗವಂತನ / ಭಗವತಿಯ ಚರಿತ್ರೆ / ಲೀಲೆಗಳ ಸಂಗ್ರಹವೇ ಭಾಗವತ. ಇದು ವೇದವ್ಯಾಸಕೃತವಾದ, ೧೨ ಸ್ಕನ್ಧಗಳೂ, ಅವುಗಳಲ್ಲಿ ೩೩೨ ಅಧ್ಯಾಯಗಳೂ, ಅವುಗಳೊಳಗೆ ಒಟ್ಟು ೧೮,೦೦೦ ಶ್ಲೋಕಗಳೂ ಇರುವ, ಪ್ರಧಾನವಾಗಿ ಭಗವಂತನ ಮಹಾತ್ಮೆಯನ್ನು ವರ್ಣಿಸುವ ಉದ್ಗ್ರಂಥವಾಗಿದೆ. “ಯತ್ರಾಧಿಕೃತ್ಯ ಗಾಯತ್ರೀಂ ವರ್ಣ್ಯತೇ ಧರ್ಮವಿಸ್ತರಃ | ವೃತ್ರಾಸುರವಧೋಪೇತಂ ತದ್ಭಾಗವತಮಿಷ್ಯತೇ ||”— (ಮತ್ಸ್ಯಪುರಾಣೇ) ಎಲ್ಲಿ / ಯಾವುದರಲ್ಲಿ, ಗಾಯತ್ರೀಮಂತ್ರಾರ್ಥವನ್ನು ಮುಂದಿಟ್ಟು, ಧರ್ಮದ ವಿಸ್ತಾರವು ವರ್ಣಿಸಲ್ಪಡುವುದೋ, ಯಾವುದು ವೃತ್ರಾಸುರನ ವಧೆಯ ಕಥೆಯನ್ನು ಹೊಂದಿರುವುದೋ, ಅದು ಭಾಗವತವೆನಿಸಿದೆ ಎಂದಿದೆ ಮತ್ಸ್ಯಪುರಾಣ. ಇನ್ನೊಂದೆಡೆಯಲ್ಲಿ ಹಯಗ್ರೀವಬ್ರಹ್ಮವಿದ್ಯೆಯೆಂದು ಭಾಗವತವು ಕರೆಯಲ್ಪಟ್ಟಿದೆ. ಇದು ಪುರಾಣವಾದರೂ, ಸಾಹಿತ್ಯದ ಪರಮಾವಧಿ ಗ್ರಂಥವಾಗಿ “ವಿದ್ಯಾ ಭಾಗವತಾವಧಿ:” ಎಂಬ ಪ್ರಸಿದ್ಧಿಗೆ ಪಾತ್ರವಾಗಿದೆ. “ವಿದ್ಯಾವತಾಂ ಭಾಗವತೇ ಪರೀಕ್ಷಾ” ಎಂಬ ಮಾತು ವಿಶ್ರುತವಾಗಿದೆ. “ಸ್ವಾದು ಸ್ವಾದು ಪದೇ ಪದೇ” ಎಂಬುದು ಜ್ಞಾನಿ... Read more
ದುರ್ಗಾಸಪ್ತಶತೀ ಪ್ರವಚನಸಾರ —ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಶ್ವರಭಾರತೀಮಹಾಸ್ವಾಮಿಗಳ ಅನುಗ್ರಹಸಂದೇಶ October 07, 2022 ದುರ್ಗಾಸಪ್ತಶತೀ ಪ್ರವಚನಸಾರ —ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಶ್ವರಭಾರತೀಮಹಾಸ್ವಾಮಿಗಳ ಅನುಗ್ರಹಸಂದೇಶ *ಶರನ್ನವರಾತ್ರ ~ ಸಪ್ತಶತೀ ಆಧಾರಿತ ಪ್ರವಚನ | ದಿನ–1* 26-09-2022 ✨✨✨✨✨ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀಮಹಾಸ್ವಾಮಿಗಳವರು ವಿಷ್ಣುಗುಪ್ತ ವಿಶ್ವವಿದ್ಯಾಪೀಠಮ್ನ ವಿದ್ಯಾರ್ಥಿಗಳಿಗಾಗಿ ಅನುಗ್ರಹಿಸಿದ ದುರ್ಗಾಸಪ್ತಶತೀ ಆಧಾರಿತ ಪ್ರವಚನದ *ಅಕ್ಷರ ರೂಪ*..🙏 ✨✨✨✨✨ Video : https://youtu.be/O_tx2T3O96w ಯಾ ಮಾಯಾ ಮಧುಕೈಟಭ ಪ್ರಮಥಿನೀ ಯಾ ಮಹಿಷೋನ್ಮೂಲಿನೀ ಯಾ ಧೂಮ್ರೇಕ್ಷಣ ಚಂಡ-ಮುಂಡ ಮಥಿನೀ ಯಾ ರಕ್ತಬೀಜಕ್ಷಯೀ || ಯಾ ಸಾ ಶುಂಭ-ನಿಶುಂಭ ದೈತ್ಯದಲಿನೀ ಯಾ ಸಿದ್ಧಿಲಕ್ಷ್ಮೀಃಪರಾ ಸಾ ಚಂಡೀ ನವಕೋಟಿ ಮೂರ್ತಿಸಹಿತಾ ಮಾಂ ಪಾತು ದುರ್ಗಾಂಬಿಕಾ || ದುರ್ಗೇ ಸ್ಮೃತಾ ಹರಸಿ ಭೀತಿಮಶೇಷಜಂತೋಃ ಸ್ವಸ್ಥೈಃ ಸ್ಮೃತಾ ಮತಿಮತೀವ ಶುಭಾಂ ದದಾಸಿ | ದಾರಿದ್ರ್ಯದುಃಖಭಯಹಾರಿಣಿ ಕಾ ತ್ವದನ್ಯಾ ಸರ್ವೋಪಕಾರಕರಣಾಯ ಸದಾರ್ದ್ರಚಿತ್ತಾ || ವಿಶ್ವ ಜನನಿ ತ್ರಿಗುಣಾತ್ಮಿಕೆ ದುರ್ಗೆ ದೇವಿಗೆ ನಮಸ್ಕಾರ ಮಾಡೋಣ. ಇದು ದೇವಿಗೆ ನಮಸ್ಕರಿಸುವ ಕಾಲ, ಶಿವನಿಗೆ ಹೇಗೆ ಶಿವರಾತ್ರಿಯಲ್ಲಿ ನಮಿಸಿದರೆ ಪುಣ್ಯವೋ ಹಾಗೇ ಅಮ್ಮನವರನ್ನು ನವರಾತ್ರಿಯಲ್ಲಿ ನಮಸ್ಕರಿಸಿದರೆ ಕೋಟಿ ಪಾಲು ಹೆಚ್ಚು ಪುಣ್ಯ, ಈ ಒಂಬತ್ತು ರಾತ್ರಿಗಳೂ ತುಂಬಾ ಪುಣ್ಯ ಕೊಡುವಂಥದ್ದು. ಭಾದ್ರಪದ ಮಾಸದಲ್ಲಿ ಕಳೆದದ್ದು ಪಿತೃ ಪಕ್ಷ, ಈಗ ಪ್ರಾರಂಭವ... Read more
Comments
Post a Comment