Posts

Showing posts from October, 2022

ದುರ್ಗಾಸಪ್ತಶತೀ ಪ್ರವಚನಸಾರ —ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಶ್ವರಭಾರತೀಮಹಾಸ್ವಾಮಿಗಳ ಅನುಗ್ರಹಸಂದೇಶ

ದುರ್ಗಾಸಪ್ತಶತೀ ಪ್ರವಚನಸಾರ —ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಶ್ವರಭಾರತೀಮಹಾಸ್ವಾಮಿಗಳ ಅನುಗ್ರಹಸಂದೇಶ *ಶರನ್ನವರಾತ್ರ ~ ಸಪ್ತಶತೀ ಆಧಾರಿತ ಪ್ರವಚನ | ದಿನ–1* 26-09-2022 ✨✨✨✨✨ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀಮಹಾಸ್ವಾಮಿಗಳವರು ವಿಷ್ಣುಗುಪ್ತ‌ ವಿಶ್ವವಿದ್ಯಾಪೀಠಮ್‌ನ ವಿದ್ಯಾರ್ಥಿಗಳಿಗಾಗಿ ಅನುಗ್ರಹಿಸಿದ ದುರ್ಗಾಸಪ್ತಶತೀ ಆಧಾರಿತ ಪ್ರವಚನದ *ಅಕ್ಷರ ರೂಪ*..🙏 ✨✨✨✨✨ Video : https://youtu.be/O_tx2T3O96w   ಯಾ ಮಾಯಾ ಮಧುಕೈಟಭ ಪ್ರಮಥಿನೀ ಯಾ ಮಹಿಷೋನ್ಮೂಲಿನೀ ಯಾ ಧೂಮ್ರೇಕ್ಷಣ ಚಂಡ-ಮುಂಡ ಮಥಿನೀ ಯಾ ರಕ್ತಬೀಜಕ್ಷಯೀ || ಯಾ ಸಾ ಶುಂಭ-ನಿಶುಂಭ ದೈತ್ಯದಲಿನೀ ಯಾ ಸಿದ್ಧಿಲಕ್ಷ್ಮೀಃಪರಾ ಸಾ ಚಂಡೀ ನವಕೋಟಿ ಮೂರ್ತಿಸಹಿತಾ ಮಾಂ ಪಾತು ದುರ್ಗಾಂಬಿಕಾ || ದುರ್ಗೇ ಸ್ಮೃತಾ ಹರಸಿ ಭೀತಿಮಶೇಷಜಂತೋಃ ಸ್ವಸ್ಥೈಃ ಸ್ಮೃತಾ ಮತಿಮತೀವ ಶುಭಾಂ ದದಾಸಿ | ದಾರಿದ್ರ್ಯದುಃಖಭಯಹಾರಿಣಿ ಕಾ ತ್ವದನ್ಯಾ ಸರ್ವೋಪಕಾರಕರಣಾಯ ಸದಾರ್ದ್ರಚಿತ್ತಾ || ವಿಶ್ವ ಜನನಿ ತ್ರಿಗುಣಾತ್ಮಿಕೆ ದುರ್ಗೆ ದೇವಿಗೆ ನಮಸ್ಕಾರ ಮಾಡೋಣ. ಇದು ದೇವಿಗೆ ನಮಸ್ಕರಿಸುವ ಕಾಲ, ಶಿವನಿಗೆ ಹೇಗೆ ಶಿವರಾತ್ರಿಯಲ್ಲಿ ನಮಿಸಿದರೆ ಪುಣ್ಯವೋ ಹಾಗೇ ಅಮ್ಮನವರನ್ನು ನವರಾತ್ರಿಯಲ್ಲಿ ನಮಸ್ಕರಿಸಿದರೆ ಕೋಟಿ ಪಾಲು ಹೆಚ್ಚು ಪುಣ್ಯ, ಈ ಒಂಬತ್ತು ರಾತ್ರಿಗಳೂ ತುಂಬಾ ಪುಣ್ಯ ಕೊಡುವಂಥದ್ದು. ಭಾದ್ರಪದ ಮಾಸದಲ್ಲಿ ಕಳೆದದ್ದು ಪಿತೃ ಪಕ್ಷ, ಈಗ ಪ್ರಾರಂಭವ...