ಶ್ರೀಮದ್-ವಾರುಣ-ಮಹಾಪುರಾಣಮ್ ೩
ಶ್ರೀಮದ್-ವಾರುಣಮಹಾಪುರಾಣಮ್ ೧.೧.೩ ತೃತೀಯೋऽಧ್ಯಾಯಃ ( ಋ.ಸಂ.೧೦.೧೨೧.೧, ತೈ.ಸಂ.೪.೨.೮.೫— ಹಿರಣ್ಯಗರ್ಭ ಇತಿ ದಶರ್ಚಂ ಸೂಕ್ತಮ್ | ಹಿರಣ್ಯಗರ್ಭಃ ಪ್ರಾಜಾಪತ್ಯ ಋಷಿಃ | ತ್ರಿಷ್ಟುಪ್ ಛನ್ದಃ | ಕಶಬ್ದಾಭಿಧೇಯಃ ಪ್ರಜಾಪತಿಃ, ದೇವತಾ || ಹಿರಣ್ಯಗರ್ಭಃ ಸಮವರ್ತತಾಗ್ರೇ ಭೂತಸ್ಯ ಜಾತಃ ಪತಿರೇಕ ಆಸೀತ್ | ಸ ದಾಧಾರ ಪೃಥ್ವೀಂ ದ್ಯಾಮುತೇಮಾಂ ಕಸ್ಮೈ ದೇವಾಯ ಹವಿಷಾ ವಿಧೇಮ || ) ಹಿರಣ್ಯಗರ್ಭಸೂಕ್ತಂ ಹಿ ದಶರ್ಚಂ ದಶಮೇ ತಥಾ | ಋಗ್ವೇದೇ ಮಣ್ಡಲೇ ತತ್ರ ಶತೋತ್ತರೈಕವಿಂಶಕಮ್ || ೧ || ಋಗ್ವೇದಸಂಹಿತೆಯಲ್ಲಿ ೧೦ನೆಯ ಮಂಡಲದಲ್ಲಿ ೧೨೧ನೇ ಸೂಕ್ತವೇ ಹಿರಣ್ಯಗರ್ಭಸೂಕ್ತವು. ಇದು ೧೦ ಋಕ್ಕುಗಳಿಂದ ಕೂಡಿರುವುದು. ಪ್ರಜಾಪತಿಸುತೋ ದ್ರಷ್ಟಾ ಹಿರಣ್ಯಗರ್ಭನಾಮಕಃ | ತ್ರಿಷ್ಟುಪ್-ಛನ್ದಃ ಕಶಬ್ದಾಖ್ಯಃ ಪ್ರಜಾಪತಿಶ್ಚ ದೇವತಾ || ೨ || ಇದರ ದ್ರಷ್ಟಾರನು (ಋಷಿಗಳು ಮಂತ್ರದ್ರಷ್ಟಾರರೇ ಹೊರತು ಕರ್ತಾರರಲ್ಲ, ಮಂತ್ರಗಳನ್ನೂ, ಮಂತ್ರಾರ್ಥಗಳನ್ನೂ ಕಂಡುಕೊಂಡವರೇ ಋಷಿಗಳು. “ಋಷಿರ್ದರ್ಶನಾತ್”) ಪ್ರಜಾಪತಿಯ ಮಗನಾಗಿ ಪ್ರಾಜಾಪತ್ಯನೆನಿಸಿದ ಹಿರಣ್ಯಗರ್ಭನೆಂಬವನು. ಈ ಸೂಕ್ತವು ೧೧ ಅಕ್ಷರಗಳ ೪ ಪಾದಗಳುಳ್ಳ ತ್ರಿಷ್ಟುಪ್ ಛಂದಸ್ಸಿನಲ್ಲಿದೆ. (ವೈದಿಕ ಛಂದಸ್ಸಿನ ವಿವಿಧ ಲೌಕಿಕ ಆವೃತ್ತಿಗಳೇ ವೃತ್ತಗಳು. ವೈದಿಕ ತ್ರಿಷ್ಟುಪ್ ಛಂದಸ್ಸಿಗೆ ಲೌಕಿಕ ಉದಾಹರಣೆಗಳು— ಇಂದ್ರವಜ್ರಾ, ಉಪೇಂದ್ರವಜ್ರಾ, ಉಪಜಾತಿ, ಶಾಲಿನೀ, ವಾತೋರ್ಮೀ, ರಥೋದ್ಧತಾ…) “ಕಃ” ಎಂಬ ಹೆಸರಿನ ಪ್ರಜಾಪತ...