ಶ್ರೀಮದ್-ವಾರುಣ-ಮಹಾಪುರಾಣಮ್ ೨ ದ್ವಿತೀಯೋऽಧ್ಯಾಯಃ ( ಋ.ಸಂ.೧೦.೧೨೯.೧— ನಾಸದಾಸೀನ್ನೋ ಸದಾಸೀತ್ತದಾನೀಂ ನಾಸೀದ್ ರಜೋ ನೋ ವ್ಯೋಮಾ ಪರೋ ಯತ್ | ಕಿಮಾವರೀವಃ ಕುಹ ಕಸ್ಯ ಶರ್ಮನ್- -ಅಂಭಃ ಕಿಮಾಸೀದ್ಗಹನಂ ಗಭೀರಮ್ ||) ಇನ್ದ್ರಿಯಾತೀತಮವ್ಯಕ್ತ- -ಮವ್ಯಾಕೃತಂ ತಥಾಪಿ ವಾ | ಅಸದ್ ಇತ್ಯುಚ್ಯತೇ ವೇದೇ ಮಿಥ್ಯಾऽನಾತ್ಮೇತಿ ನಾತ್ರ ವೈ || ೧ || ಅವ್ಯಕ್ತವೂ (ಸಾಕಾರವಾಗಿ ವ್ಯಕ್ತವಾಗದಿರುವುದೂ) ಇಂದ್ರಿಯಗಳಿಗೆ ನಿಲುಕದುದೂ ಅವ್ಯಾಕೃತವೂ (ಅಪ್ರಕಟಿತವೂ, ಸಮಷ್ಟಿಕರ್ಮಬೀಜರೂಪವಾಗಿ ಜಗತ್ಕಾರಣವಾದ ಅಜ್ಞಾನರೂಪವೂ, ಸರ್ವಕಾರಣಜ್ಞಾನಬ್ರಹ್ಮಸ್ವರೂಪವೂ, ಸಾಂಖ್ಯಮತದ ಪ್ರಧಾನತತ್ತ್ವವೂ ) ಇಲ್ಲಿ ವೇದದ ಸಂಹಿತಾ-ಬ್ರಾಹ್ಮಣಭಾಗದಲ್ಲಿ ಹೇಳಿರುವಂತೆ ಅಸತ್ ಎನ್ನಲ್ಪಡುತ್ತದೆಯೇ ಹೊರತು, ವೇದಾಂತದಲ್ಲಿ ಹೇಳಿರುವಂತೆ ಮಿಥ್ಯೆಯೂ, ಅನಾತ್ಮವೂ ನೇರವಾಗಿ ಇದಕ್ಕೆ ಸಂಬಂಧಿಸಿಲ್ಲ. ಇಲ್ಲಿ ಪೂರ್ವಕರ್ಮಬೀಜಯುಕ್ತವಾದ ಅವ್ಯಕ್ತಬ್ರಹ್ಮತತ್ತ್ವವನ್ನೇ ಅಸತ್ ಎನ್ನಲಾಗಿದೆ. ಇನ್ದ್ರಿಯಗ್ರಾಹ್ಯಮೇವೇತಿ ವ್ಯಕ್ತಂ ವ್ಯಾಕೃತಮಿತ್ಯಪಿ | ಸತ್ ಪದೇನ ವಿಜಾನೀಯಾತ್ ಸತ್ಯಮಾತ್ಮೇತಿ ನಾತ್ರ ವೈ || ೨ || ವ್ಯಕ್ತವೂ (ಸಾಕಾರವಾಗಿ ತೋರಿಬರುವುದೂ) ಇಂದ್ರಿಯಗೋಚರವಾದುದೂ ವ್ಯಾಕೃತವಾದುದೂ (ಪ್ರಕಟಿತವಾದುದೂ, ನಾಮರೂಪಗಳಿಂದ ತೋರಿಬರುವುದೂ) ಆಗಿರುವ ತತ್ತ್ವವನ್ನು ಸತ್ ಎಂಬ ಶಬ್ದದಿಂದ ವಿಶೇಷವಾಗಿ ತಿಳಿಯಬೇಕು. ಇಲ್ಲ...